Success Stories

Success Stories

A new jumbo nut hybrid H-130 which was superior in yield (3kg/tree in 3 years of planting) with cluster bearing (10-20 nuts/panicle) and bold size (12-13g nut weight) and big apple (>100g) was evaluated and released for cultivation and performance evaluation in farmers field. The hybrid is highly precocious, early flowering with long fruiting duration.  Plant is vigorous but sparse canopy and having large leaves and big inflorescence with strong 8-10 rachis.  Has high number of bisexual flowers and fruit set is as high as more than 70 nuts per panicle in the initial stage and subsequently 10-20 nut retention per panicle.  The hybrid responds well to pruning and is suitable both for ultra-density planting and normal spaced plantations.  Hybrid has high shelling (29.9%) with big kernels – 3.5 – 5 g a rare type among released varieties and falls under W-130-150 category kernel grade.  The kernel protein is 21% and fat 46% and other usual mineral contents.
                                 

This Directorate has released a selection from Goa, ie., Bhaskara during 2006, which escapes tea mosquito bug infestation due to late flowering habit. The variety has a good yielding ability and results in secondary flowering in case of incidence of TMB during the initial months. The nut weight is 7.20 g, with 30.60% shelling and has a kernel grade of W240 and apple weight of 64.00g with firm flesh pinkish orange color and sugar content of 6.13 Brix which is most preferred in the domestic and international market.  The following demonstration farmers have been cultivating this variety for about > 7 years and have expressed satisfaction about its performance which is an indicator of its field performance. Sri. Chandrashekhara Udup, Kenchanur , Kundapura Taluk, Udupi District has been cultivating this variety for the last 7 years. He has 200 trees planted  at 7 X 7 m spacing with an average yield of 10-12 kg per tree in the 7th year,  which works out to a productivity of nearly 2.0 t/ha. This farmer adopts organic practices as integrated nutrition management (INM).

Sri. Dayananda Rai, Sri Rama Nilaya, Madnur village,Puttur Taluk, D.K., District has been cultivating  variety Bhaskara for the last 10 years. He owns around 200 plants realizing an yield of 800 kg/ha in the fifth year of planting (i.e., 2nd year of yield) itself following organic practices for nutrition management.  Sri. Ravichandra Kalpatharu  farms , Amtage, Uruval village, Belthangady Taluk, D.K.District has been cultivating  variety Bhaskara developed by ICAR-DCR for the last 5 years. He has planted 100 plants at normal density and has obtained an yield of 500 kg in fifth year of planting (i.e., 2nd year of yield)through organic practices for nutrition and pest management.
                                                     

Ultra Density Planting in Cashew @1100 to 1600 plants/ha or more, maintenance of productive canopy by pruning technique for obtaining early benefits and higher yield was developed, standardized and demonstrated in farmers field (>500 ha) for the first time in the history of cashew research. The technique has shown to improve the yield by 3-4 times per unit area over traditional type of planting. With this technique targeted yield can be achieved in a short span of time and the dependency for rawnut from abroad can be reduced and India can be self sufficient with cashew rawnuts. Identified the precocious type of varieties such as VRI-3, NRCC Sel-2, Ullal-1 and Ullal-3 for this purpose and popularized this technology in farmer’s field. Also developed a Hybrid – H-130 for this which is high yielding type with bold nut, precocious and suitable for high density planting and it is in the pipeline for release.

Comparative evaluation of pruning technique of ultra density in farmers field as a participatory programme has been taken up.

                                 

 

ಗೇರು ಅಪರಿಚಿತವಲ್ಲದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೀಚಡಿ, ಉಳ್ಳೂರು, ತ್ಯಾಗರ್ತಿ, ಹೊಸಂತೆ, ನಂದಿತಳೆ ಗ್ರಾಮಗಳಲ್ಲಿ ವ್ಯವಸ್ಥಿತ ಗೇರು ಕೃಷಿಯ ಹೊಸರೂಪ – ‘ಅತಿಸಾಂದ್ರ ಪದ್ಧತಿ’ಯ ಬೇಸಾಯ ಬೇರು ಬಿಡುತ್ತಿದೆ. ಸರಿಯಾಗಿ ಕೃಷಿ ಮಾಡಿದರೆ ಎರಡನೇ ವರ್ಷದಲ್ಲೇ ಎಕರೆಗೆ ೪ ಕ್ವಿಂಟಲ್ ಗಿಂತಲೂ ಜಾಸ್ತಿ ಇಳುವರಿ ಕೊಡುವ ಸಾಮರ್ಥ್ಯವಿರುವ ಈ ಪದ್ಧತಿ  ದೀರ್ಘಾವದಿ ಬೆಳೆಯಾದ ಗೇರಿನ ಕೃಷಿಯಲ್ಲಿ ಹೊಸ ಆಶಾಕಿರಣ. ಮಾಮೂಲಿ ಪದ್ಧತಿಯಲ್ಲಿ ಮೊದಲ ಬೆಳೆಗೆ ಮೂರು ವರ್ಷ ಕಾಯಬೇಕಿದ್ದರೆ ಇದರಲ್ಲಿ ಎಂಟು ತಿಂಗಳಿಗೆ ಬೆಳೆ ಶುರುವಾಗಿ ಅಲ್ಲಿನ ಕೃಷಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಧನಾತ್ಮಕ ಬೆಳವಣಿಗೆಯ ಬಗ್ಗೆ ವಿವರಗಳಿಲ್ಲಿವೆ.

“ಈ ವರ್ಷ ಗೇರು ಬೀಜ ಕೆಜಿಗೆ ನೂರೈವತ್ತು ರೂಪಾಯಿ ಇರುತ್ತಿದ್ದರೆ, ನನಗೆ ಈ ಗೇರು ತೋಟಕ್ಕೆ ಮಾಡಿದ ಅರ್ಧ ಖರ್ಚು ವಾಪಾಸು ಬಂದಿರುತ್ತಿತ್ತು” ಪ್ರಗತಿಪರ  ಕೃಷಿಕ ಚಂದ್ರು ಅವರ ಮಾತು. ಅವರ ಗೇರು ತೋಟದ ವಯಸ್ಸೆಷ್ಟು ಗೊತ್ತಾ? ಬರೀ ಒಂದೂವರೆ ವರ್ಷ ಅಷ್ಟೆ!! ಗೇರಿನಂತಹ ದೀರ್ಘಾವಧಿ ಬೆಳೆಗಳಲ್ಲಿ ಹಾಕಿದ ಖರ್ಚು ವಾಪಾಸು ಬರಬೇಕೆಂದರೆ ಏಳೆಂಟು ವರ್ಷಗಳೇ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಚಂದ್ರು ಅಳವಡಿಸಿದ ಕೃಷಿ ಪದ್ಧತಿ  ಮಹತ್ವ ಪಡೆಯುತ್ತದೆ.  ಇವರು ಸಾಗರ ಪೇಟೆಯಿಂದ ಶಿವಮೊಗ್ಗ ರಸ್ತೆಯಲ್ಲಿ  ಹತ್ತು ಕಿಮೀ ದೂರವಿರುವ ಉಳ್ಳೂರಿನಲ್ಲಿ ಅತಿಸಾಂದ್ರ ಪದ್ಧತಿಯಲ್ಲಿ ಗೇರು ತೋಟ ಮಾಡಿದ್ದಾರೆ. ಕೆಂಪು ಗೊಚ್ಚು ಮಣ್ಣು (ಕಲ್ಲು ಮತ್ತು ಮಣ್ಣು ಮಿಶ್ರಣ) ಇರುವ ಅವರ ತೋಟದಲ್ಲಿ ಈ ಪದ್ಧತಿಗೆ ಹೊಂದುವ ವಿಆರ್ಐ-೩ ತಳಿಯ ಇನ್ನೂರೈವತ್ತು ಗಿಡಗಳಿವೆ. ಇಂತಹ ಮಣ್ಣಿನಲ್ಲಿ ಇನ್ಯಾವ ಬೆಳೆಯೂ ಇಷ್ಟು ಚೆನ್ನಾಗಿ, ಲಾಭದಾಯಕವಾಗಿ ಬರಲಾರದು. “ನನಗನ್ನಿಸುವಂತೆ ಗೇರಿನಲ್ಲಿ ಮುಖ್ಯವಾಗಿ ಎರಡು ರೀತಿಯ ಕೃಷಿ ಮಾಡಬಹುದು. ಒಂದು ಬಹಳ ಜಾಸ್ತಿ ಗಮನ ಕೊಟ್ಟು 10 ಅಡಿ x 10 ಅಡಿ ಅಂತರದಲ್ಲಿ- ಅಂದರೆ ಅತಿಸಾಂದ್ರ ಪದ್ಧತಿಯಲ್ಲಿ ಗಿಡವನ್ನು ಪೊದೆಯ ರೀತಿಯಲ್ಲಿ ನಿರ್ವಹಣೆ ಮಾಡಿ ಬೇಗ ಲಾಭ ಪಡೆಯುವುದು. ಇನ್ನೊಂದು ಆರಾಮವಾಗಿ ಮಾಡುವ ಕೃಷಿ- 25 ಅಡಿ  x 25 ಅಡಿ ಅಂತರ ಕೊಟ್ಟು ದೀರ್ಘಾವಧಿಯಲ್ಲಿ ಲಾಭ ಪಡೆಯುವುದು” ವಿಶ್ಲೇಷಿಸುತ್ತಾರೆ ಸಾಗರ ಪ್ರಾಂತ್ಯದಲ್ಲಿ ರೇಷ್ಮೆ, ರಬ್ಬರ್ ಮತ್ತು ಪಪಾಯ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ಚಂದ್ರು.

“ಗೇರಿನಲ್ಲಿ ಅತಿಸಾಂದ್ರ ಪದ್ಧತಿ ಬಹಳ ಭರವಸೆ ಮೂಡಿಸುವ ವಾಣಿಜ್ಯ ಉದ್ದೇಶದ ಕೃಷಿಕ್ರಮ. ಎರಡು-ಮೂರು ವರ್ಷಗಳಲ್ಲಿ ಹೆಚ್ಚಿನ ಲಾಭ ಪಡೆದುಬಿಡಬಹುದು. ಸಾಮಾನ್ಯ ಪದ್ಧತಿಯಲ್ಲಿ ಒಂದು ಎಕರೆಯಲ್ಲಿ ೮-೧೦ ವರ್ಷಗಳಲ್ಲಿ ತೆಗೆಯಬಹುದಾದ ಇಳುವರಿಗಿಂತ ಜಾಸ್ತಿ ಇಲ್ಲಿ ಮೂರು-ನಾಲ್ಕೇ ವರ್ಷಗಳಲ್ಲಿ ತೆಗೆದುಬಿಡಬಹುದು” ಹೀಗೆಂದವರು ನೀಚಡಿ ಸಮೀಪದ ನಂದಿತಳೆ ಊರಿನ ಕೃಷಿಕ ವೆಂಕಟೇಶ್. ಸುಮಾರು ಎರಡು ಸಾವಿರ ವಿಆರ್ ಐ-೩ ತಳಿಯ ಗಿಡಗಳನ್ನು ಅವರು ಅತಿಸಾಂದ್ರ ಪದ್ಧತಿಯಲ್ಲಿ ಬೆಳೆಸಿದ್ದಾರೆ.

ಭರವಸೆಯ ಪದ್ಧತಿ:

ಅತಿಸಾಂದ್ರ ಪದ್ಧತಿಯನ್ನು ಗೇರಿನಲ್ಲಿ ಕಂಡುಹಿಡಿದು ಅದಕ್ಕೆ ರೂಪ ಕೊಟ್ಟವರು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗಂಗಾಧರ ನಾಯಕ್. ಬಹಳ ದೀರ್ಘಕಾಲದಿಂದ ಗೇರು ತಳಿಗಳ ಪ್ರೂನಿಂಗ್ (ಸವರುವಿಕೆ) ಸ್ಪಂದನೆ ಗಮನಿಸಿ ಈ ವಿಧಾನವನ್ನು ರೂಪಿಸಿದ್ದಾರೆ.(ವಿವರಗಳಿಗೆ ಮೊದಲ ಟೇಬಲ್ ನೋಡಿ).  “ಈ ವಿಧಾನಕ್ಕೆ ವಿಆರ್ ಐ- ೩ ಮತ್ತು ಹೆಚ್-೧೩೦ ತಳಿಗಳು ಬಹಳ ಸೂಕ್ತ”. “ನಮ್ಮ ದೇಶದಲ್ಲಿ ಈಗ ಸುಮಾರು 8 ಲಕ್ಷ ಟನ್ ಗೇರು ಉತ್ಪಾದನೆಯಾಗುತ್ತಿದೆ. ಆದರೆ ೧೮-೨೦ ಲಕ್ಷ ಟನ್ ಗಳಷ್ಟು ಗೇರು ಬೀಜದ ಬೇಡಿಕೆ ಇದೆ. ಮುಂಬರುವ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಸರಿಯಾದ ತಳಿ ಮತ್ತು ಅತಿಸಾಂದ್ರ ಪದ್ಧತಿಯನ್ನು ತಿಳಿದು ಅನುಸರಿಸಿದರೆ ಹೆಕ್ಟೇರ್ ಒಂದಕ್ಕೆ ೨ ಟನ್ ಗಳಿಗಿಂತಲೂ ಜಾಸ್ತಿ ಬೆಳೆ ಬೆಳೆಯಬಹುದು. ಇದು ದೇಶದಲ್ಲಿ ಗೇರು ಬೀಜದ ಉತ್ಪಾದನೆಯ ಕೊರತೆ ನೀಗಲು ಸಹಾಯಕವಾಗುತ್ತದೆ” ಎನ್ನುವ ಭರವಸೆ ಡಾ. ನಾಯಕ್ ಅವರದು. ಈ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುತ್ತಮುತ್ತಲಿನ ಕೃಷಿಕರಲ್ಲಿ– ತಿಂಗಳಾಡಿಯ ಸುಭಾಷ್ ರೈ, ದೇರ್ಲದ ಕರುಣಾಕರ ರೈ, ಪಾಪನಡ್ಕದ ದೇರಣ್ಣ ರೈ, ಈಶ್ವರ ಮಂಗಲದ ನಟೇಶ್ ಮೂಡಾಯೂರು, ಮಂಚಿಯ ಸತ್ಯಭಾಮ ಇತ್ಯಾದಿ ಕೃಷಿಕರ ತೋಟಗಳಲ್ಲಿ ಈಗಾಗಲೇ ಬಹಳ ಒಳ್ಳೆಯ ಫಲಿತಾಂಶ ನೀಡುತ್ತಿದೆ. ಹಾಂ, ಅತಿಸಾಂದ್ರ ಪದ್ಧತಿಯ ಕೃಷಿ ಗೇರಿಗೆ ಮಾತ್ರ ಸೀಮಿತವಲ್ಲ. ಬಾಳೆ, ಪೇರಳೆ, ಮಾವು, ಹಲಸು, ಲಿಚಿ  ಮುಂತಾದ  ಬೆಳೆಗಳಲ್ಲೂ ಈಗ ಜನಪ್ರಿಯವಾಗುತ್ತಿದೆ.

ಕೆಲಸದ ಆರಂಭ:

ಎರಡು ವರ್ಷದ ಹಿಂದಿನ ಮಾತು. ನಾನು ಕೆಲಸ ಮಾಡುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ನೀಚಡಿ ಊರು ಮತ್ತು ಆಸುಪಾಸಿನ ಕೆಲ ಕೃಷಿರು ಬಂದಿದ್ದರು. ಗೇರಿನಲ್ಲಿ ಜನಪ್ರಿಯವಾಗುತ್ತಿರುವ ಅತಿಸಾಂದ್ರ ಪದ್ಧತಿ ಹಾಗೂ ಹೊಸ ತಳಿಗಳ ವಿಚಾರ ಹಂಚಿಕೆ ಮತ್ತು ಪುತ್ತೂರಿನ ಆಸುಪಾಸಿನ ಕೃಷಿಕರ ಹೊಲದಲ್ಲಿನ ಈ ತಂತ್ರಜ್ಞಾನದ ಅನುಷ್ಠಾನವನ್ನು ಅವರಿಗೆ ತೋರಿಸಿದ್ದೆವು. ಬಂದವರಲ್ಲಿ ಕೆಲವರಿಗೆ ಗೇರು ನರ್ಸರಿಯನ್ನು ಮಾಡುವ ಉತ್ಸಾಹವೂ ಇತ್ತು! ಅದಕ್ಕೆ ಬೇಕಾದ ಕಸಿಕಡ್ಡಿ ಹಾಗೂ ಅಡಿಗಿಡಗಳನ್ನು ಎಬ್ಬಿಸಲು ಬೇಕಾದ ಬೀಜ ಕೊಡುವ ಕೃಷಿಕರ ಮತ್ತು ಕಸಿ ಕಟ್ಟುವ ನಿಪುಣ ಕೆಲಸಗಾರರ ಸಂಪರ್ಕವನ್ನೂ ಒದಗಿಸಿಕೊಟ್ಟಿದ್ದೆವು. ನಾನು ಬಹುತೇಕ ಒಂದಿಡೀ ದಿನವನ್ನು ಅವರೊಡನೆ ಕಳೆದಿದ್ದೆ. ನಂತರ ನಮ್ಮ ಸಂಶೋಧನೆಯ ಕೆಲಸದ ನಡುವೆ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಲಾಗಿರಲಿಲ್ಲ.

ಈಗೊಂದು ತಿಂಗಳ ಹಿಂದೆ ಊರಿಗೆ ಹೋದಾಗ, ನೀಚಡಿ ಗ್ರಾಮದಲ್ಲಿ ಗೇರಿನ ಕೆಲಸ ಏನು ನಡೆದಿದೆ ಅಂತ ನೋಡೋಣ ಅಂತ ಕುತೂಹಲದಿಂದ ಹೋಗಿದ್ದೆ. ಸುಮಾರು ನಾಲ್ಕೂವರೆಯ ಹೊತ್ತಿಗೆ ಹೋದರೆ ಹಲವಾರು ಕೃಷಿಕರು ಕಾಯುತ್ತಿದ್ದರು.. ಅವರ ಉತ್ಸಾಹ ನೋಡಿ ನನಗೆ ಅಚ್ಚರಿ!! ನೀಚಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 35 ಜನ ಕೃಷಿಕರು 30,000 ಕ್ಕಿಂತಲೂ ಹೆಚ್ಚು ಗಿಡಗಳನ್ನು ಅತಿಸಾಂದ್ರ ಪದ್ಧತಿಯಲ್ಲಿ ನೆಟ್ಟಿದ್ದಾರೆ. ಮೊದಲು ಭೇಟಿ ನೀಡಿದ್ದು ವೆಂಕಟೇಶ್ ನಂದಿತಳೆಯವರ ತೋಟಕ್ಕೆ. ವಿಆರ್ ಐ-3 ತಳಿಯ ಸುಮಾರು 2000 ಗಿಡಗಳನ್ನು ಅತಿಸಾಂದ್ರ ಪದ್ಧತಿಯಲ್ಲಿ ನೆಟ್ಟಿದ್ದರು. ಅದಾಗಲೇ ಇಳುವರಿ ಶುರುವಾಗಿತ್ತು. ಜೊತೆಗೆ ಕಲ್ಲಂಗಡಿಯನ್ನು ಅಂತರಬೆಳೆಯಾಗಿ ಬೆಳೆದು ಕೊಯಿಲು ಮಾಡಿದ್ದರು. ಕಡಿಮೆ ಮಾತಿನ ವೆಂಕಟೇಶ್ ಕೆಲಸ ಜಾಸ್ತಿ ಮಾಡುವವರು! ಅವರು ಪಾಲಿಹೌಸಿನಲ್ಲಿ ಈ ವರ್ಷ ವಿಆರ್ಐ -3 ಮತ್ತು ವೆಂಗುರ್ಲಾ-7 ತಳಿಯ ಸುಮಾರು ಮೂವತ್ತು ಸಾವಿರ ಕಸಿಗಿಡಗಳನ್ನು ಬೆಳೆಸುತ್ತಿದ್ದಾರೆ. ಇನ್ನೊಬ್ಬ ಕೃಷಿಕ ಪ್ರಶಾಂತ್ ಜೋಯಿಸ್ 440 ಗಿಡಗಳನ್ನು ಬೆಳೆಸಿದ್ದಾರೆ. ಮಂಜುನಾಥ್ ಅವರ ತೋಟದಲ್ಲಿ 1400 ವಿಆರ್ ಐ-3 ತಳಿಯ ಗಿಡಗಳಿವೆ. ಜೊತೆಗೆ ವೆಂಗುರ್ಲಾ-7ನ್ನು ಸಾಮಾನ್ಯ ಪದ್ಧತಿಯಲ್ಲಿ ನೆಟ್ಟಿದ್ದಾರೆ. ನಂತರ ಪ್ರಸಾದ್ ಅವರ ನರ್ಸರಿ ಭೇಟಿ. ಎರಡು ದಿನ ಬಿಟ್ಟು ಉಳ್ಳೂರಿನ ಚಂದ್ರು ಅವರ ತೋಟಕ್ಕೂ ಹೋಗಿದ್ದೆ. ಅವರು ವಿಆರ್ ಐ-3 ತಳಿಯ 250 ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲಲ್ಲಿ ಮಧ್ಯೆ ದ್ವಿದಳ ಧಾನ್ಯದ ಗಿಡಗಳೂ ಇದ್ದವು. ಡ್ರಿಪ್ ಮೂಲಕ ನೀರಾವರಿ ಹಾಗೂ ಪ್ರತಿಯೊಂದು ಗೇರು ಗಿಡಕ್ಕೂ ಪ್ಲಾಸ್ಟಿಕ್ ಶೀಟ್ ಮಲ್ಚಿಂಗ್ ಮಾಡಿದ್ದಾರೆ. ಪ್ರೂನಿಂಗ್ ಕೂಡ ಬಹಳ ಸಮರ್ಪಕವಾಗಿತ್ತು. ಚಂದ್ರು ಅವರ ಗೇರು ನರ್ಸರಿಯಲ್ಲಿ  ಈ ವರ್ಷ ವಿಆರ್ ಐ -೩ ಮತ್ತು ವೆಂಗುರ್ಲಾ-೭ ತಳಿಗಳ ಸುಮಾರು ೩೦,೦೦೦ ಗಿಡಗಳನ್ನು ಮಾಡುವ ಗುರಿ ಅವರದು.

ನೀಚಡಿಯ ಕಾರ್ಯಕ್ರಮ:

ನನ್ನ ಮೊದಲ ಭೇಟಿಯಲ್ಲಿ ನೀಚಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೃಷಿಕರ ಉತ್ಸಾಹವನ್ನು ಹೆಜ್ಜೆ ಹೆಜ್ಜೆಗೂ ಗಮನಿಸಿದ್ದೆ. ಸಾಗರ ಪ್ರಾಂತ್ಯದಲ್ಲಿ ವೆನಿಲ್ಲಾ ಪರಾಗಸ್ಪರ್ಶ ಕಲಿತು ಮಾಡಿದ ಮೊದಲ ಗ್ರಾಮ ನೀಚಡಿ ಅಂತ ಆ ಪ್ರಾಂತ್ಯದ ಕೃಷಿಕರು ಹೇಳುತ್ತಾರೆ. ಜಲಸಾಕ್ಷರತೆಯಲ್ಲೂ ನೀಚಡಿ ಭಾಗದ ಕೃಷಿಕರು ಮುಂದಿದ್ದಾರೆ. “ನಮ್ಮಲ್ಲಿ ನೀವು ನಮಗೆ ಗೇರು ಕೃಷಿಯ ಬಗ್ಗೆ ಮಾಹಿತಿ ನೀಡಬೇಕು”ಎಂದಿದ್ದರು. ಅದರಂತೆ ಮೇ ಹನ್ನೆರಡನೇ ತಾರೀಕು ನೀಚಡಿಯಲ್ಲಿ ಗೇರು ಬೆಳೆಯ ಬಗ್ಗೆ ಮಾಹಿತಿ ಕಾರ್ಯಾಗಾರವೊಂದನ್ನು ನಡೆಸಿದ್ದೆ. ಅಂದು ಅತಿಸಾಂದ್ರ ಪದ್ಧತಿಯಲ್ಲಿ ಗೇರು ಬೆಳೆಯುವ ಬಗ್ಗೆ ಸಾಕಷ್ಟು ವಿಚಾರ ವಿನಿಮಯ ನಡೆಯಿತು.

ಮಣ್ಣಿನ ಆಳ ಕಡಿಮೆ ಇರುವಲ್ಲಿ ಸೂಕ್ತ ಅತಿಸಾಂದ್ರ ಪದ್ಧತಿ:

ನೀಚಡಿಗೆ ಹೋದಾಗ, ಸಾಗರದ ಮಕ್ಕಳ ತಜ್ಞ ಡಾ. ಪುಟ್ಟಪ್ಪ ಬೇತೂರು ಅವರ ಗೇರು ತೋಟಕ್ಕೂ ಭೇಟಿ ಕೊಟ್ಟೆ. ಅವರ ಹೊಲದಲ್ಲಿ ನಾಲ್ಕೈದು ಅಡಿಯಷ್ಟು ಮಾತ್ರ ಮೇಲ್ಮಣ್ಣು ಇದೆ. ಅದರ ಕೆಳಗೆ ಮುರಕಲ್ಲಿನ ಹಾಸು. ಅಂತಲ್ಲಿಯೂ ವಿಆರ್ ಐ-೩ ತಳಿ ಚೆನ್ನಾಗಿ ಬಂದಿದೆ. ನೆಟ್ಟು ಅರು ತಿಂಗಳು. ಈಗಾಗಲೇ ಹೂ ಬರಲಿಕ್ಕೆ ಆರಂಭವಾಗಿದೆ. ಅಂತಹ ಪ್ರದೇಶಕ್ಕೆ ಅತಿಸಾಂದ್ರ ಪದ್ಧತಿ ಬಹಳ ಹೊಂದುವ ಹಾಗೆ ಕಾಣುತ್ತದೆ. ನಾಲ್ಕೈದು ವರ್ಷ ಬೆಳೆ ತೆಗೆದು ಮತ್ತೆ ಎಲ್ಲ ಗಿಡಗಳನ್ನೂ ತೆಗೆದು ಮರುನಾಟಿ ಮಾಡುವುದು ಅಂತಹ ಮಣ್ಣಿಗೆ ಸೂಕ್ತವಾದೀತು. ಡಾಕ್ಟರಿಗೆ ನೀರು ಬೇಡದ ಗೇರು ಬೆಳೆ ಬಗ್ಗೆ ಬಹಳ ಭರವಸೆ ಹಾಗೂ ಅತ್ಯುತ್ಸಾಹ! ಎಲ್ಲರಲ್ಲೂ ಅದು ಮೂಡುತ್ತಿದೆ.

ಸಾಗಬೇಕಾದ ದಾರಿ:

ನೀಚಡಿ ಮತ್ತು ಸುತ್ತಮುತ್ತಲಿನ ಎಲ್ಲ ಕೃಷಿಕರು ಗೇರು ಸಂಶೋಧನಾ ಕೇಂದ್ರದ ಮಾರ್ಗದರ್ಶನದಲ್ಲಿ ನರ್ಸರಿ ಮತ್ತು ತೋಟವನ್ನು ಈಗ ತಾನೇ ಬೆಳೆಸಿದ್ದಾರೆ. ಆದರೆ ಅಲ್ಲಿನ ಗ್ರಾಮಗಳಲ್ಲಿ ಮಾಡಬೇಕಾದ ಕೆಲಸ ಸಾಕಷ್ಟಿದೆ.

೧) ಅಲ್ಲಿರುವ ನರ್ಸರಿಗಳನ್ನು ಆಯಾ ಮಾಲೀಕರು ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚಿನ್ ಇವರಿಂದ ದೃಢೀಕರಣ ಮಾಡಿಸುವುದು ಮತ್ತು ಅದರ ಮೂಲಕ ಆ ಪ್ರಾಂತ್ಯದ ಕೃಷಿಕರಿಗೆ ಉತ್ತಮ ಗೇರು ಗಿಡಗಳ ಪೂರೈಕೆಯಾಗುವಂತೆ ನೋಡಿಕೊಳ್ಳುವುದು

೩) ಕೃಷಿಕರು ಸಂಘಟಿತರಾಗಿ ಗ್ರಾಹಕರಿಗೆ ನೇರ ಮಾರಾಟ ಮಾಡಿದರೆ ಮಾತ್ರ ಉದ್ಧಾರ ಸಾಧ್ಯ. ಇದಕ್ಕೆ ರೈತ ಉತ್ಪಾದಕ ಕಂಪನಿಯೊಂದನ್ನು ಅವರು ಹುಟ್ಟುಹಾಕಬೇಕು. ಆ ನಿಟ್ಟಿನಲ್ಲಿ ಅಡಿಕಟ್ಟು ಕೆಲಸಗಳು ಆರಂಭವಾಗಿವೆ. ಇದು ಎಲ್ಲಾ ಗೇರು ಬೆಳೆಯುವ ಹೋಬಳಿಗಳಲ್ಲಿ ಆಗಬೇಕಾಗಿರುವ ಕೆಲಸ.

೨) ರೈತ ಉತ್ಪಾದಕ ಕಂಪನಿಯಡಿ ನೀಚಡಿ ಮತ್ತು ಹಲವಾರು ಗ್ರಾಮಗಳನ್ನು ಸೇರಿಸಿಕೊಂಡು ಅಲ್ಲಿ ಒಂದು ಗೇರು ಬೀಜ ಮತ್ತು ಹಣ್ಣಿನ ಸಂಸ್ಕರಣಾ ಕೇಂದ್ರವನ್ನು ತೆರೆಯುವುದು. ಅಲ್ಲಿನದೇ ಒಂದು ಬ್ರಾಂಡ್ ಮಾಡಿ ಹತ್ತಿರದ ಸಾಗರ ಪೇಟೆ, ಶಿವಮೊಗ್ಗ, ಬೆಂಗಳೂರು, ಮುಂಬಯಿ ಇತ್ಯಾದಿ ನಗರಗಳಿಗೆ ಅಲ್ಲಿನ ಉತ್ಪನ್ನಗಳನ್ನು ತಲುಪಿಸುವುದು. ಅಮೇರಿಕಾ, ಯುರೋಪುಗಳಿಗೂ ಪ್ರಯತ್ನಿಸಬಹುದು. ಕನಸು ಕಂಡು ನನಸು ಮಾಡುವ ಛಲ ಬೇಕಷ್ಟೆ. ಇದಕ್ಕೆ ಅಲ್ಲಿನ ಕೃಷಿಕರು ಬೀಜ ಮತ್ತು ಹಣ್ಣಿನ ಸಂಸ್ಕರಣೆಯನ್ನು ಮೊದಲು ಕಲಿಯಬೇಕಿದೆ. ನಂತರ ಮಾರುಕಟ್ಟೆ ಅಧ್ಯಯನ ಇತ್ಯಾದಿ.

ಇವೆಲ್ಲ ಆಗುವುದಕ್ಕೆ ನೀಚಡಿ ಊರಿನ ಕೃಷಿಕರ ಉತ್ಸಾಹ ಹೀಗೇ ಮುಂದುವರೆಯಬೇಕು! ನಮ್ಮ ಗೇರು ಸಂಶೋಧನಾ ಕೇಂದ್ರ ಬೇಕಾದ ಎಲ್ಲ ರೀತಿಯ ಸಹಾಯಹಸ್ತ ನೀಡಲು ಸದಾ ಸಿದ್ಧವಿರುತ್ತದೆ.

ಗಮನಿಸಿ: ನೀಚಡಿ ಕ್ಲಸ್ಟರಿನ ಈ ಬೆಳವಣಿಗೆ ಮುಂದೆ ಯಾವ ರೀತಿ ರೂಪುಗೊಳ್ಳುತ್ತದೆ ಎಂಬುದನ್ನು ಇನ್ನೂ ಮೂರ್ನಾಲ್ಕು ವರ್ಷ ಗಮನಿಸಬೇಕಿದೆ. ಈಗಲೇ ಇದನ್ನು ‘”ಅಭೂತಪೂರ್ವ ಯಶಸ್ಸು” ಎಂಬ ಷರಾ ಬರೆದು ಮುಗಿಸುವುದು ತಪ್ಪಾದೀತು. ಸಾಗಬೇಕಾದ ದಾರಿ ಸಾಕಷ್ಟಿದ್ದರೂ ಈ ಧನಾತ್ಮಕ ಬೆಳವಣಿಗೆಯ ಬಗ್ಗೆ ದಾಖಲಿಸುವುದು ಕೃಷಿಕರಿಗೆ ಉತ್ತೇಜನಕಾರಿ ಎಂಬ ದೃಷ್ಟಿಯಿಂದ ಈ ನುಡಿಚಿತ್ರ.

ಅತಿಸಾಂದ್ರ ಪದ್ಧತಿಯಲ್ಲಿ ಗೇರು ಬೆಳೆ :  ಹೊಸ ಭರವಸೆ ಮೂಡಿಸುತ್ತಿರುವ ನೀಚಡಿ ಕ್ಲಸ್ಟರ್ !

ಚಿತ್ರ-ಲೇಖನ: ಡಾ. ಮೋಹನ್ ತಲಕಾಲುಕೊಪ್ಪ

This Directorate initiated the programme of laying out Demonstration plots on improved Cashew Production Technology in farmers fields as part of the Institute Extension Programme since 1987.  Demonstrations on recent cashew varieties, improved package of practices, high density orcharding and intercropping with other crops were taken up in such plots to demonstrate the technologies in farmers fields and to get proper feed back on the technologies which were given to farmers.  So far more than 150 such demonstration plots were established in different parts of Dakshina Kannada district of Karnataka state.

An area ranging from 1 acre to 2.5 Acres was covered under different technologies in various plots.  The financial assistance for the initial establishment of orchards and maintenance of orchard for subsequent 2 years was provided to the farmers by the Directorate of Cashewnut and Cocoa Development (DCCD), Government of India, Cochin under area expansion programme or National Horticulture Mission.  The Demonstration plots established under high density planting system (with spacing of 6m x 4m) with varieties such as Ullal-3, Bhaskara and Vengurla-4  have shown superior performance in terms of nut yield.  The plots with 416 plants have yielded more than 2200 kg of raw nuts per  Acre during 2010 (7th year of orchard life) during the year of very low yield in general.

Field days organized in such demonstration plots evoked very good response from cashew farmers of the region.  Several farmers have come forward to take up such plots on seeing the results.  Thus it was found that demonstration plots on improved cashew technologies are the most effective means of convincing about the new cashew technologies / varieties to the cashew farmers.

Cashew is generally a spreading type of tree crop and requires lot of space for its canopy spread.  When the planting is recommended at a spacing of 8m x 8m, the plants take minimum of 6-7 years to cover the entire allotted space.  In the initial years such space can be made use of for planting suitable intercrops which would help in generation of additional income, conservation of soil and moisture and utilization of space and other natural resources more effectively in the initial stage of orchard life.

Selection of a suitable crop for mixed cropping or intercropping is very important since intercrop should not compete with the main crop for any of the natural resources.  Cashew is a sun loving crop plant and requires maximum solar energy far better nut yield.  Therefore the crops which grow to the height of cashew canopy or more will not be suitable intercrops.  As the main crop cashew is a deep rooted crop it is always advisable to select the annual crops or crops with shallow root system as intercrops to avoid root competition with main crop.  Several crops have been tried as intercrops in cashew under varied climate conditions.

The west coast region of Karnataka and northern part of Kerala is a high rainfall zone and rain continues for about 5 months from June-November every year.  The sufficient soil moisture available can be made use of by growing long duration annual crops  without spending much on irrigation.  In this region following 2 crops were found to be successful intercrops in cashew.


Pineapple

As an intercrop in cashew orchards it has given very encouraging results.  In the beginning the trenches are opened across the slope and pineapple  suckers are planted.  The Pineapple crop can be taken up upto 6-7 years of orchard life of cashew.  The fruit yield is ready for harvest after 1½ year onwards depending on type of planting material and growth regulator used.  A net income of more than 1.00 lakh can be realized per 1 ha area.

Elephant foot yam (Amarphophalus) 

It is another important crop which can be successfully grown in cashew orchard in the initial years.

The planting of the crop can be taken up once the pre-monsoon showers are received during summer months (April).  The crop comes to harvest by end of rainy season (Nov-Dec.).  Under well managed condition very good crop can be harvested and a good profit made from the crop.

Other crops

Several other annual crops also can successfully be grown as intercrops in initial stages of cashew orchard.  They are annual kharif vegetables such as Bhendi, Brinjal, cowpea and cucumbers, ginger, turmeric etc. which can be successfully grown and profit be realised.  In the existing cashew orchard, Black Pepper can be grown as intercrop by trailing the Black Pepper vines on cashew trees.

Cultivates cashew using ultra high density process

Mrs. Sathyabhama enhanced her farm revenues by adopting the technique of ultra density farming for cashew plantation. “Taking the advice from scientist of Putur NRCC I took up this new technique of farming,” she adds. Her farm spread in four acres. It is located at Kolnadu village, Bantwal Taluk, Karnataka.

The advice turned out to be boon for the farmer! Mrs. Sathyabhama got the income from the second year of planting itself. Plant population per unit area of land is increased and thereby high levels of yields were obtained. Trees are maintained in bush shape with heavy pruning at the end of harvest every year. All the cashew plants were bought from NRCC at Rs. 20/plant.

Usually farmers plant cashew at normal density of planting at 8 m x 8 m that accommodates only 60-65 trees/acre. Besides under normal density planting, harvesting is done from the 2nd year of planting only. Whereas in ultra high density planting of cashew saplings are planted at 3 m x 3 m spacing and high density planting implies 5 m x 5 m spacing between plant-plant. Mrs. Sathyabhama opted for ultra high density farming and cultivated plants at 3 m x 3 m distance that accommodated 440trees/acre.

Cashew varieties that grown in ultra high density farming are NRCC Sln-2, VRI 3, Ullal, Ullal 3, Ullal 4, Bhaskar and Vendurla. Timely pruning is most crucial in the farming process. It can grow well organically too but the farm soil must be under chemical farming for a substantial period before hand. “Presently I am using chemical fertilizer and occasionally cow dung based manure,” she says.

Sharing benefits of high density farming in cashew she says, “With this technique farming has become easier and I am also getting good yield. When compared to other farming I feel cashew farming effortless! Once in a year, we give fertilizer and manure. We do not water our cashew trees as these are rain fed. We usually plant during rainy season hence later it will not need water.”

The details on the cost-benefit ratio, in the second year itself the trees yielded above 1 kg/tree thus amounting to 4.4 quintal/acre. Mrs. Sathyabhama acquired 11 quintals of yield from 440 trees after 3 years of planting @ 2.5kg/tree which will go upto 2.5 tonnes/ha in the third year of planting. This is otherwise not possible under normal density planting where only 60-65 trees/acre and harvesting is done from 3rd year of plantation. She is expecting better yield now, “The trees are 4 years old so the yield may increase in coming years. I am hopeful!” she adds.

Cashew is sold to the traders from Mangalore, “They come and buy from the farm itself. We sold cashew at the price of Rs. 223/kg. We do not give our produce to any factories,” she says.

Mrs. Sathyabhama is focused on increasing the yield. “I am expecting better returns. I have made the investment and now I have to look after this well to reap good returns,” she signs off.

Contact details:

Mrs. Sathyabhama
Sarith Compound, Manchi Post,
Kolnadu village, Bantwal Taluk,
Dakshina Kannada – 574 323, Karnataka,  
Mobile: 08971284717, 08255236335

Mrs. Sathyabhama – cultivates high density cashew