ರಾಷ್ಟ್ರಿಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 2021-22ನೇ ಸಾಲಿನಲ್ಲಿ ಗೇರು ಕೃಷಿಗೆ ಪ್ರೋತ್ಸಾಹಧನದ ವಿವರಗಳು
ವ್ಯಾಪ್ತಿ: ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳು
ದಯವಿಟ್ಟು ಗಮನಿಸಿ:
೧) ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ಡಿಸೆಂಬರ್ 31, 2021
೨) ಮೊದಲು ಬಂದವರಿಗೆ ಆದ್ಯತೆ
ನಿಬಂಧನೆಗಳು:
ಗೇರು ಗಿಡಗಳ ಖರೀದಿ, ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಸಹಾಯಧನ (2021-22ನೇ ಸಾಲಿಗೆ ಮಾತ್ರ ಅನ್ವಯ).
1) ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಇಲ್ಲಿನ ನರ್ಸರಿ, ಅಥವಾ ಗೇರು ಮತ್ತು ಕೋಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚಿನ್ ಇವರಿಂದ ದೃಢೀಕರಿಸಿದ ಇನ್ಯಾವುದೇ ನರ್ಸರಿಗಳಿಂದ ಗಿಡಗಳನ್ನು ಖರೀದಿಸಿದ ಮೂಲ ಬಿಲ್ಲನ್ನು ಲಗತ್ತಿಸಬೇಕು. ಜೆರಾಕ್ಸ್ ಪ್ರತಿಗಳನ್ನು ಪರಿಗಣಿಸುವುದಿಲ್ಲ.
2) ಸಾಮಾನ್ಯ ಪದ್ಧತಿಯಲ್ಲಿ (200 ಗಿಡ/ಒಂದು ಹೆಕ್ಟೇರಿಗೆ) ಒಬ್ಬರಿಗೆ ನಾಲ್ಕು ಹೆಕ್ಟೇರ್ ವರೆಗೆ ಸೀಮಿತವಾಗಿ ಕೊಡಲಾಗುವುದು.
ಡ್ರಿಪ್ ನೀರಾವರಿಯಲ್ಲಿ ಗೇರಿನ ತೋಟ: ಅ) ಹೆಕ್ಟೇರ್ ಒಂದಕ್ಕೆ ಗಿಡಗಳ ಖರೀದಿ, ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಮೂರು ಕಂತುಗಳಲ್ಲಿ ನಲವತ್ತು ಸಾವಿರದವರೆಗೆ ಸಹಾಯಧನ
ಡ್ರಿಪ್ ನೀರಾವರಿ ಇಲ್ಲದೆ ಗೇರಿನ ತೋಟ : ಅ) ಹೆಕ್ಟೇರ್ ಒಂದಕ್ಕೆ ಗಿಡಗಳ ಖರೀದಿ, ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಮೂರು ಕಂತುಗಳಲ್ಲಿ ಇಪ್ಪತ್ತು ಸಾವಿರದವರೆಗೆ ಸಹಾಯಧನ
3) ಕ್ಷೇತ್ರಭೇಟಿ ಹಾಗೂ ಪರಿಶೀಲನೆಯ ನಂತರ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು.
Click here to Download the Form