ICAR DCR

ನಮ್ಮ ಬಗ್ಗೆ

ವೈಶಿಷ್ಟ್ಯಗಳು, ನಕಲು ಹಕ್ಕುಗಳು ಮತ್ತು ಅಭಿವೃದ್ಧಿ ತಂಡ

ಗೋಡಂಬಿಯಲ್ಲಿ ಪೋಷಕಾಂಶ ನಿರ್ವಹಣೆಯ ಈ ತಂತ್ರಾಂಶವನ್ನು ಆರ್.ಕೆ.ವಿ.ವೈ- ರಫ್ತಾರ್, ಕರ್ನಾಟಕ ಸರ್ಕಾರದ ಬೆಂಬಲದಿಂದ ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯವು ಅಭಿವೃದ್ಧಿಪಡಿಸಿದೆ. ಮಣ್ಣಿನ ಫಲವತ್ತತೆ ಮಟ್ಟಗಳ ಆಧಾರದ ಮೇಲೆ ಸಸ್ಯದ ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರಗಳ ಲೆಕ್ಕಾಚಾರ ಮಾಡಲು ಮತ್ತು ಪೋಷಕಾಂಶಗಳನ್ನು ಬಳಸಲು ರೈತರಿಗೆ ಮತ್ತು ಇತರರಿಗೆ ಸಹಾಯ ಮಾಡಲು ಈ ಅಪ್ಲಿಕೇಶನ್ನನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹುದಾದ ಹೆಚ್ಚುವರಿ ರಸಗೊಬ್ಬರದ ಬಳಕೆ ಮತ್ತು ಹಣ, ಸಂಪನ್ಮೂಲಗಳ ಅನಗತ್ಯ ಬಳಕೆಯನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ಕಡಿಮೆ ರಸಗೊಬ್ಬರದ ಬಳಕೆ ಬೆಳೆಗಳಲ್ಲಿ ಕಡಿಮೆ ಇಳುವರಿಗೆ ಕಾರಣವಾಗಬಹುದು. ಪ್ರಸ್ತುತ ತಂತ್ರಾಂಶ ಎರಡು ಭಾಷೆಗಳಲ್ಲಿ ಲಭ್ಯವಿದೆ (ಇಂಗ್ಲೀಷ್ ಮತ್ತು ಕನ್ನಡ). ಭಾರತದ ಎಲ್ಲಾ ಗೋಡಂಬಿ ಬೆಳೆಯುವ ಪ್ರದೇಶಗಳಲ್ಲಿ ರಸಗೊಬ್ಬರದ ಅಗತ್ಯವನ್ನು ನಿರ್ಣಯಿಸಲು ಈ ಅಪ್ಲಿಕೇಶನ್ನನ್ನು ವಿನ್ಯಾಸಗೊಳಿಸಲಾಗಿದೆ.

2019 ರ ಮಾರ್ಚ್ 3 ರಂದು ಮೊದಲ ಬಾರಿಗೆ ಈ ಅಪ್ಲಿಕೇಶನ್ನನ್ನು ಅಭಿವೃದ್ಧಿಪಡಿಸಿ ಮತ್ತು ಬಿಡುಗಡೆ ಮಾಡಲಾಯಿತು. © ಐಸಿಎಆರ್ - ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, ಕರ್ನಾಟಕ. ಎಲ್ಲಾ ಹಕ್ಕುಗಳನ್ನುಕಾಯ್ದಿರಿಸಲಾಗಿದೆ.

ಅಭಿವೃದ್ಧಿಪಡಿಸಿದವರು:

ಡಾ.ಶಂಸುದ್ದೀನ್ ಮಂಗಲಸೇರಿ (ಪಿಐ)

ಡಾ. ಎಮ್. ಜಿ. ನಾಯಕ್ (ಸಹ-ಪಿಐ)

ಡಾ.ಜೆ.ಡಿ. ಅಡಿಗ (ಸಹ-ಪಿಐ)

ಡಾ. ಪ್ರೀತಿ. ಪಿ (ಸಹ-ಪಿಐ)

ಶ್ರೀ. ಬಿ.ಎಂ. ಮುರಳೀಧರ (ಸಹ-ಪಿಐ)

ಡಾ. ಸಿದ್ದಣ್ಣ ಸವಧಿ

ಅನುವಾದ:

ಕನ್ನಡ- ಶ್ರೀಮತಿ. ವಿದ್ಯಾಶ್ರೀ

ಹಣ ಸಹಾಯ:

ಆರ್.ಕೆ.ವಿ.ವೈ-ರಫ್ತಾರ್, ಕರ್ನಾಟಕ ಸರ್ಕಾರ.

ವಿನ್ಯಾಸಕರು:

ಡಾಟಾಫ್ಲೋ ಸಿಸ್ಟಮ್, ಹೌರಾ ಪಶ್ಚಿಮ ಬಂಗಾಳ